ತಾಯಿ ಶಾರದೆ ಲೋಕ ಪೂಜಿತೆ 
ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಖ್ಯದಾತೆ  ||ಪ||

ಅಂಧಕಾರವ ಓಡಿಸು
ಜ್ಞಾನಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು
ಶಾಂತಿಯ ಉಳಿಸು     ||ಪ||

ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ 
ನಮ್ಮ ಕೋರಿಕೆ ಆಲಿಸಮ್ಮ     ||ಪ||

ಒಳ್ಳೆ ಮಾತಗಳಾಡಿಸು
ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು
ವಿದ್ಯೆಯ ಕಳಿಸು
ಆಸೆ ಪೂರೈಸು     ||ಪ||